ನೆಫಿಲಿನೈಟ್ -
	ನೆಫಿಲೀನ್ ಹಾಗೂ ಪೈರಾಕ್ಸಿನ್ ಖನಿಜಯುತವಾದ ಕ್ಷಾರ ಬೆಸಾಲ್ಟ್ ಶಿಲೆ. ಲೂಸಿಟೈಟ್ ಪರ್ಯಾಯ ನಾಮ. ಇದರಲ್ಲಿ ಆಲಿವಿನ್ ಕಂಡುಬರುವುದಿಲ್ಲ. ಫೆಲ್ಡ್‍ಸ್ಟಾರ್ ಮಾತ್ರ ಅತ್ಯಂತ ಕಡಿಮೆ ಅಂಶದಲ್ಲಿದೆ. ನೆಫಿಲಿನೈಟ್ ಬಲು ವಿರಳ ಶಿಲೆ. ಟರ್ಷಿಯರಿ ಲಾವಾದಲ್ಲಿ ಮಾತ್ರ ಕಾಣಸಿಗುತ್ತದೆ. ಇದು ಕ್ಯಾನರಿ ದ್ವೀಪ, ದಿ ಅಜೋರ್ಸ್, ಕೇಪ್ ವರ್ದೆ ದ್ವೀಪ, ಬೊಹೀಮಿಯ ಹಾಗೂ ಓಡೆನ್‍ವಾಲ್ಡ್‍ನ ಕಟ್ಸೆನ್ ಬುಕೆಲ್‍ನಲ್ಲಿ ಹೇರಳವಾಗಿದೆ.
(ಟಿ.ಆರ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ